4.13 ಪಾಲುಗಾರಿಕೆ (Partnership):

 

ನೀವು ಸಾಮಾನ್ಯವಾಗಿ ಪಾಲುಗಾರಿಕೆ ವ್ಯವಹಾರ ಅಥವಾ ವ್ಯವಹಾರದಲ್ಲಿ ಪಾಲುಗಾರಿಕೆ ಎಂಬ ವಿಷಯ ಕೇಳಿರಬಹುದು. ಹೆಚ್ಚಿನ ಸಂದರ್ಭದಲ್ಲಿ ಇಬ್ಬರು ಅಥವಾ ಹೆಚ್ಚು ಮಂದಿ ಒಟ್ಟಾಗಿ ಒಂದು ಹೊಸ ವ್ಯವಹಾರವನ್ನು ಆರಂಭಿಸುವರು. ವ್ಯವಹಾರ ಯಾವುದೇ ಇರಬಹುದು - ಹೋಟೆಲ್ ನಡೆಸುವುದು, ಅಂಗಡಿ ವ್ಯಾಪಾರ, ಆಮದು, ರಫ್ತು ವ್ಯವಹಾರ ..ಹೀಗೆ, ಯಾವುದೇ ಒಂದು ವ್ಯವಹಾರವನ್ನು ಸಾಲದ ಹಣ ತರದೆ ಆರಂಭಿಸಲು ಸಾಧ್ಯವಾಗದೇ ಇರಬಹುದು. ವ್ಯವಹಾರವನ್ನು ಅಭಿವೃದ್ಧಿ ಪಡಿಸಲು, ವಿಸ್ತರಿಸಲು, ಬ್ಯಾಂಕುಗಳಿಂದಾಗಲೀ ಬಾಡಿಗೆ ಕೊಳ್ಳುವಿಕೆಕಂಪೆನಿಯಿಂದಾಗಲೀ ಸಾಲವನ್ನು ಪಡೆಯಬಹುದು. ಯಾರೇ ಆಗಲಿ, ಸಾಲ ಕೊಡುವ ಮುಂಚೆ, ವ್ಯವಹಾರ ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸುತ್ತಾರೆ. ಮೊದಲು ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯುತ್ತಿರಬೇಕು. ಇದಾಗ ಬೇಕಾದರೆ ಸ್ಥಾಪಕರು ವ್ಯವಹಾರದಲ್ಲಿ ಹಣವನ್ನು ವಿನಿಯೋಗಿಸಬೇಕು. ಇಬ್ಬರು ಅಥವಾ ಹೆಚ್ಚು ಮಂದಿ ಒಟ್ಟಾಗಿ ನಡೆಸುವ ವ್ಯವಹಾರಕ್ಕೆ ಪಾಲುಗಾರಿಕೆ ವ್ಯವಹಾರ(‘Partnership’) ಎನ್ನುತ್ತೇವೆ. ಪಾಲುಗಾರಿಕೆ ವ್ಯವಹಾರದಲ್ಲಿ ಭಾಗವಹಿಸುವವರನ್ನು ಪಾಲುದಾರರು(‘Partners’) ಎನ್ನುತ್ತೇವೆ. ಎಲ್ಲಾ ಪಾಲುದಾರರೂ ಸಮನಾದ ಹಣವನ್ನು ಹಾಕಬೇಕಾಗಿಲ್ಲ. ಅದೇರೀತಿ ಅವರೆಲ್ಲರ ಹಣ ಒಟ್ಟಿಗೆ ಅಥವಾ ಒಂದೇ ಅವಧಿಯವರೆಗೆ ಇರಬೇಕಾಗಿಯೂ ಇಲ್ಲ. ಎಲ್ಲಾ ಪಾಲುದಾರರು ತಮ್ಮ ಬಂಡವಾಳವನ್ನು ಒಂದೇ ಅವಧಿಗೆ ತೊಡಗಿಸಿದ್ದರೆ, ಅದನ್ನು ಸರಳ ಪಾಲುಗಾರಿಕೆ (‘Simple Partnership’). ಎನ್ನುವರು. ಇಲ್ಲಿ ಎಲ್ಲಾ ಪಾಲುದಾರರ ಬಂಡವಾಳದ ಪ್ರಮಾಣ ಸಮವಾಗಿರಬೇಕಾಗಿಲ್ಲ. ಅವರೆಲ್ಲರಿಗೆ ದೊರೆಯುವ ಲಾಭಾಂಶದ ಅನುಪಾತವು ಅವರ ಬಂಡವಾಳಗಳ ಅನುಪಾತಕ್ಕೆ ಸಮನಾಗಿರುತ್ತದೆ.

 

4.13 ಸಮಸ್ಯೆ 1: ರಾಮ ಮತ್ತು ಜಾನ್ ಇಬ್ಬರೂ ಒಟ್ಟಾಗಿ ಒಂದು ಪಾಲುಗಾರಿಕೆ ವ್ಯವಹಾರವನ್ನು ಆರಂಭಿಸುವರು. ರಾಮನು 15,000 ರೂ.ಗಳನ್ನು ಜಾನ್ 5,000ರೂ.ಗಳನ್ನು ತಮ್ಮ ಬಂಡವಾಳಗಳಾಗಿ ತೊಡಗಿಸಿದ್ದಾರೆ. ಅವರ ವ್ಯವಹಾರದಲ್ಲಿ 5000ರೂ. ಲಾಭವಾದರೆ, ಅವರಿಬ್ಬರಿಗೆ ದೊರಕುವ ಲಾಭಾಂಶದ ಪ್ರಮಾಣ ಎಷ್ಟು?

 

ಪರಿಹಾರ:

ರಾಮನು ಜಾನ್ಗಿಂತ ಹೆಚ್ಚು ಹಣವನ್ನು ಹಾಕಿದ್ದಾನೆ. ಹಾಗಾದರೆ ಅವನಿಗೆ ಎಷ್ಟು ಹೆಚ್ಚು ಲಾಭ ಸಿಗಬೇಕು? ಲಾಭವನ್ನು ಅವರಿಬ್ಬರ ಬಂಡವಾಳಗಳ ಅನುಪಾತಕ್ಕನುಗುಣವಾಗಿ ಪಾಲು ಮಾಡಬೇಕು. ಪಾಲುದಾರರಲ್ಲಿ ವಿರಸ ಬಾರದಂತೆ ಗಣಿತ ಶಾಸ್ತ್ರದ ರೀತ್ಯಾ ಪರಿಹಾರ ಏನು?

ಅವರಿಬ್ಬರ ಬಂಡವಾಳಗಳ ಅನುಪಾತ: 15000: 5000 ಇದು ಏನನ್ನು ಸೂಚಿಸುತ್ತದೆ? ಒಟ್ಟು 20,000 ರೂ. ಬಂಡವಾಳದಲ್ಲಿ ರಾಮನ ಭಾಗ:  15,000ರೂ. (3/4  ಅಥವಾ 75%) ಜಾನ್ ಭಾಗ 5000(1/4  ಅಥವಾ 25%) ಇದೇ ಅನುಪಾತದಲ್ಲಿ ಲಾಭವನ್ನೂ ಹಂಚಬೇಕು.

 

ಹಂತ 1:

 

ರಾಮ ಮತ್ತು ಜಾನ್ ಬಂಡವಾಳಗಳ ಅನುಪಾತ= 15000:5000  =3:1.

ಇದರ ಅರ್ಥ ರಾಮನಿಗೆ 3ರೂ. ಲಾಭ ದೊರೆತರೆ ಜಾನ್ನಿಗೆ 1ರೂ. ಸಿಗಬೇಕು. 

ಅನುಪಾತದ ಪದಗಳ ಮೊತ್ತ 4(3+1). ಆದ್ದರಿಂದ 4ರೂ. ಒಟ್ಟು ಲಾಭ ಆದರೆ,ರಾಮನಿಗೆ 3ರೂ, ಜಾನ್ನಿಗೆ 1ರೂ.ಸಿಗಬೇಕು

ಹಂತ 2:

 

ಒಟ್ಟು ಲಾಭ = 5000ರೂ.

ಇದರಲ್ಲಿ ರಾಮನ ಭಾಗ = 5000*(3/4) = 3750 ರೂ.

ಜಾನ್ ಭಾಗ = 5000*(1/4) =  1250 ರೂ.

 

ತಾಳೆ :

ರಾಮ ಮತ್ತು ಜಾನ್ ಒಟ್ಟು ಲಾಭ = 3750+1250 = 5000 ರೂ. (ಲೆಕ್ಕದಲ್ಲಿದ್ದಷ್ಟೇ ಇದೆ)

ಲಾಭದ ಅನುಪಾತ 3750:1250 =3:1(ಕೊಟ್ಟ ಅನುಪಾತವೇ ಆಗಿದೆ.)

ಆದ್ದರಿಂದ ನಾವು ಮಾಡಿದ ಲಾಭಾಂಶದ ಪಾಲು ಸರಿಯಾಗಿದೆ.

4.13 ಸಮಸ್ಯೆ 2: 51,68,85 ನಿಷ್ಕ(ಹಣದ ಅಳತೆ)ಗಳನ್ನು ಒಂದು ವ್ಯಾಪಾರದಲ್ಲಿ ಮೂವರು ಹಾಕಿ 300 ನಿಷ್ಕಗಳನ್ನು  ವಾಪಾಸು ಪಡೆಯುವರು. ಅವರ ಲಾಭಗಳೆಷ್ಟು?(ಲೀಲಾವತಿ: ಶ್ಲೋಕ 95)

ಪರಿಹಾರ:

 

 

ಅವರ ಬಂಡವಾಳಗಳ ಅನುಪಾತ = 51:68:85  =3:4:5 = (3/12) : (4/12): (5/12).

ಅಂದರೆ , 12 ನಿಷ್ಕ ಪಡೆದಿದ್ದರೆ ಅವರಿಗೆ ಕ್ರಮವಾಗಿ 3, 4, 5 ನಿಷ್ಕ ಸಿಗುತ್ತಿತ್ತು.

300 ನಿಷ್ಕ ವಾಪಾಸು ಪಡೆದಿರುವುದರಿಂದ ಅವರ ಪಾಲ  (300*(3/12), (300*(4/12) , (300*(5/12) = 75,100,125

ಅವರು ಮೊದಲು 51,68,85 ನಿಷ್ಕ ಹಾಕಿರುವುದರಿಂದ ಅವರ ಲಾಭ 75-51,100-68,125-85=24,32,40

          ಇವುಗಳೂ 3:4:5 ಅನುಪಾತದಲ್ಲಿ ಇರುವುದನ್ನು ಗಮನಿಸಿ.

 

ಈಗ ಇನ್ನೊಂದು ಉದಾಹರಣೆ ನೋಡುವಾ. ಪಾಲುದಾರರಲ್ಲಿ ಒಬ್ಬನು ತನ್ನ ಬಂಡವಾಳವನ್ನು ತೊಡಗಿಸುವುದಲ್ಲದೇ, ವ್ಯವಹಾರ ಕಾರ್ಯವನ್ನು ನಿರ್ವಹಿಸುತ್ತಾನೆಂದು ಭಾವಿಸುವಾ. ಇತರ ಪಾಲುದಾರರು ತಮ್ಮ ಬಂಡವಾಳವನ್ನು ತೊಡಗಿಸುವರೇ ಹೊರತು ವ್ಯವಹಾರವನ್ನು ನೋಡಿಕೊಳ್ಳಲು ಅವರಿಗೆ ಅನುಭವ ಇರುವುದಿಲ್ಲ/ಸಮಯ ಇರುವುದಿಲ್ಲ. ರೀತಿ ವ್ಯವಹಾರದ ಕಾರ್ಯವನ್ನು ನಿರ್ವಹಿಸುವ ಪಾಲುದಾರರನ್ನು ಕಾರ್ಯನಿರತ ಪಾಲುದಾರರು(Working Partner) ಎನ್ನುತ್ತಾರೆ. ಇಂತಹವರು ಮಾಡುವ ಕೆಲಸಕ್ಕಾಗಿ, ಉಳಿದ ಎಲ್ಲಾ ಪಾಲುದಾರರೂ, ಕಾರ್ಯನಿರತ ಪಾಲುದಾರನಿಗೆ ವಿಶೇಷವಾಗಿ ನಿಧರ್üರಿಸಿದ ಒಂದು ನಿಶ್ಚಿತ ಶೇಕಡಾ ಪ್ರಮಾಣ ಲಾಭಾಂಶವನ್ನು ಕೊಡಲು ಒಪ್ಪಿರುತ್ತಾರೆ. ಕಾರ್ಯನಿರತರಿಗೆ ಭಾಗದ ಲಾಭಾಂಶ ಕೊಟ್ಟ ನಂತರ ಉಳಿಯುವ ಲಾಭದ ಹಣವನ್ನು ಅವರವರ ಬಂಡವಾಳಗಳ ಅವಧಿಗೆ ಅನ್ವಯವಾಗಿ ಹಂಚಿಕೊಳ್ಳುವರು.

 

4.13 ಸಮಸ್ಯೆ 3:   A, B ಮತ್ತು C ಗಳು ಕ್ರಮವಾಗಿ 12,000ರೂ, 8000ರೂ ಮತ್ತು 20,000ರೂ.ಗಳನ್ನು ಒಂದು ಪಾಲುಗಾರಿಕೆ ವ್ಯವಹಾರದಲ್ಲಿ ತೊಡಗಿಸುತ್ತಾರೆ. Bಯು ವ್ಯವಹಾರವನ್ನು ನೋಡಿಕೊಳ್ಳುವುದರಿಂದ, ಅದಕ್ಕಾಗಿ ಅವನಿಗೆ ಒಟ್ಟು ಲಾಭದ 10% ರಷ್ಟು ಕೊಡಬೇಕು. ಆ ಸಂಸ್ಧೆಯು 8000 ರೂ. ಲಾಭ  ಪಡೆದರೆ ಪ್ರತಿಯೊಬ್ಬರು ಪಡೆಯುವ ಹಣದ ಪ್ರಮಾಣ ಎಷ್ಟು?

 

ಪರಿಹಾರ:

ಪ್ರಥಮವಾಗಿ B ಯು ಕಾರ್ಯನಿರತ ಪಾಲುಗಾರನಾದುದರಿಂದ ಅವನಿಗೆ 10% ಲಾಭ ಕೊಡಬೇಕು =  800 ರೂ. (800010%)

ಉಳಿದ ಲಾಭ = ಒಟ್ಟು ಲಾಭ ಕಾರ್ಯನಿರತ ಪಾಲುಗಾರನಿಗೆ ಕೊಟ್ಟ ಹಣ = 8000 -800 = 7200 ರೂ.

A, B , C ಗಳ ಬಂಡವಾಳಗಳ ಅನುಪಾತ = 12000:8000:20000 = 12:8:20 = 3:2:5

ಅನುಪಾತದ ಪರಿಮಾಣಗಳ ಮೊತ್ತ = 3+2+5 = 10

A ಗೆ ಸಿಗುವ ಲಾಭ = ಉಳಿದ ಲಾಭ *(3/10) = 7200*3/10 = 2160 ರೂ.

B ಗೆ ಸಿಗುವ ಲಾಭ = ಉಳಿದ ಲಾಭ *(3/10) = 7200*2/10 = 1440 ರೂ.

C ಗೆ ಸಿಗುವ ಲಾಭ = ಉಳಿದ ಲಾ *(3/10) = 7200*5/10 = 3600 ರೂ.

B ಯು ಕಾರ್ಯನಿರತ ಪಾಲುದಾರನಾದುದರಿಂದ, ಅವನಿಗೆ ಸಿಗುವ ಒಟ್ಟು ಹಣ = 800+1440 = 2240 ರೂ.

ಇದರಿಂದ ನಮಗೇನು ಗೊತ್ತಾಗುತ್ತದೆ? B ಯು A ಗಿಂತ ಕಡಿಮೆ ಹಣ ತೊಡಗಿಸಿದರೂ ಕೂಡಾ, ಅವನು ಕಾರ್ಯ ನಿರತ ಪಾಲುದಾರನಾದುದರಿಂದ A ಗಿಂತ ಹೆಚ್ಚು ಹಣ ದೊರೆತಿದೆ.

 

ತಾಳೆ :

A, B , C ಗಳ ಲಾಭಗಳ ಅನುಪಾತ =  2160: 1440: 3600 = 3:2:5

ಇದು ಅವರು ತೊಡಗಿಸಿದ ಹಣದ ಅನುಪಾತವೇ ಆಗಿದೆ.

 

ಈಗ ಪಾಲುದಾರರು ಬೇರೆ ಬೇರೆ ಅವಧಿಗೆ ಹಣ ತೊಡಗಿಸಿದರೆ ಏನಾಗುತ್ತದೆ ಎಂದು ನೋಡುವಾ

4.13 ಸಮಸ್ಯೆ 4 : X , Y  ಮತ್ತು Z ಗಳು ಒಂದು ಪಾಲುಗಾರಿಕೆ ವ್ಯವಹಾರದಲ್ಲಿ ತೊಡಗುತ್ತಾರೆ. X ನು 4 ತಿಂಗಳ ಅವಧಿಗೆ 5000ರೂ. ಹಣ ತೊಡಗಿಸುತ್ತಾನೆ. Y ಯು 5 ತಿಂಗಳ ಅವಧಿಗ  6000ೂ. ತೊಡಗಿಸುತ್ತಾನೆ. Z   6 ತಿಂಗಳ ಅವಧಿಗೆ 4000 ರೂ. ತೊಡಗಿಸುತ್ತಾನೆ. ವರ್ಷದ ಅಂತ್ಯದಲ್ಲಿ ರೂ.3700 ಲಾಭ ದೊರೆತರೆ, ಪ್ರತಿಯೊಬ್ಬರಿಗೂ ದೊರೆಯುವ ಲಾಭಾಂಶ ಎಷ್ಟು?

 

ಪರಿಹಾರ:

ಇಲ್ಲಿ ಪಾಲುದಾರರು ಬೇರೆ ಬೇರೆ ಅವಧಿಗೆ ಹಣವನ್ನು ತೊಡಗಿಸಿದ್ದಾರೆ. ಈ ರೀತಿಯಲ್ಲಿ ಪಾಲುಗಾರಿಕೆಯನ್ನು ಸಂಯುಕ್ತ ಪಾಲುಗಾರಿಕೆ(Compound   Partnership) ಎನ್ನುವರು.

ಈಗ ಇವರು ಲಾಭದ ಪ್ರಮಾಣ ಲೆಕ್ಕ ಹಾಕುವಾ. ಇಲ್ಲಿ ಪಾಲುದಾರರು ಬೇರೆ ಬೇರೆ ಅವಧಿಗೆ ಹಣವನ್ನು ತೊಡಗಿಸಿದ್ದರಿಂದ, ನಾವೀಗ ಸಮಾನ ಅವಧಿಗೆü ಅವರವರ ಬಂಡವಾಳ ಎಷ್ಟಾಗುತ್ತದೆಂದು ತಿಳಿಯಬೇಕು. ಆ ಅನುಪಾತದಲ್ಲೇ ಲಾಭವನ್ನು ಹಂಚಬೇಕು.

 

ಹಂತ 1 :  X ನು 4 ತಿಂಗಳಿಗೆ 5000 ರೂ. ತೊಡಗಿಸಿದ್ದಾನೆ.

             Y ಯು 5 ತಿಂಗಳಿಗೆ 6000 ರೂ. ತೊಡಗಿಸಿದ್ದಾನೆ.

             Z ನು 6 ತಿಂಗಳಿಗೆ 4000 ರೂ. ತೊಡಗಿಸಿದ್ದಾನೆ..

 

ಹಂತ 2 : ಹಣ ತೊಡಗಿಸುವಿಕೆಯು ಬೇರೆ ಬೇರೆ ಅವಧಿಗೆ ಬೇರೆ ಬೇರೆ ಮೊಬಲಗು ಇರುವುದರಿಂದ, ಯಾವುದೋ ಒಂದು ನಿಗದಿತ ಅವಧಿಗೆ ಅವರ ಪಾಲನ್ನು ಲೆಕ್ಕಹಾಕಬೇಕು. ಒಂದು ತಿಂಗಳ ಅವಧಿಗೆ ಅವರೆಲ್ಲರ ಬಂಡವಾಳ ಎಷ್ಟಾಗುತ್ತದೆಂದು ನೋಡುವಾ. (ಉದಾಹರಣೆಗೆ, 12 ತಿಂಗಳ ಅವಧಿಗೆ 500 ತೊಡಗಿಸಿದರೆ, ಅದರ ಅರ್ಥ ಒಂದು ತಿಂಗಳಿಗೆ = 500*12 = 6000ರೂ. ಬಂಡವಾಳ ಹಾಕಿದ್ದಾನೆ ಎಂದು).

ಈ ತರ್ಕದಿಂದ,

 

X ನ ಬಂಡವಾ 1 ತಿಂಗಳಿಗೆ 20,000 ರೂ. (=5000*4)

Y ನ ಬಂಡವಾಳ 1 ತಿಂಗಳಿಗೆ 30,000 ರೂ. (=6000*5)

Z ನ ಬಂಡವಾಳ 1 ತಿಂಗಳಿಗೆ 24,000 ರೂ. (=4000*6)  

ಹಂತ 3 :

ಈಗ ನಾವು ಸಮಾನ ಅವಧಿಗೆ ಅವರೆಲ್ಲರ ಬಂಡವಾಳಗಳನ್ನು ನೋಡಿದೆವು.

ಅವರ ಬಂಡವಾಳಗಳ ಅನುಪಾತ: 20,000:30,000:24,000   = 10:15:12

ಒಟ್ಟು ಲಾಭ = 3700 ರೂ.

 

ಹಂತ 4:

ಅನುಪಾತದ ಪದಗಳ ಮೊತ್ತ = 37(10+15+12)

X ಗೆ ಸಲ್ಲತಕ್ಕ ಲಾಭ = (10/37)*3700 = 1000 ರೂ.

Y ಗೆ ಸಲ್ಲತಕ್ಕ ಲಾಭ = (15/37)*3700 = 1500 ರೂ.

Z ನಿಗೆ ಸಲ್ಲತಕ್ಕ ಲಾಭ = (12/37)*3700 = 1200 ರೂ.

ತಾಳೆ :

ಒಟ್ಟು ಲಾಭದ ಮೊತ್ತ = (1000+1500+1200)  = 3700 ರೂ. ಇದು ದತ್ತಾಂಶ.

ಲಾಭದ ಅನುಪಾತ: 1000:1500:1200 =10:15:12

ಇದು ಹಂತ 3 ರಲ್ಲಿ ದೊರಕಿದ ಅನುಪಾತವೇ ಆಗಿದೆ.

 

4.13 ಸಮಸ್ಯೆ 5: : A, B ಮತ್ತು C ಗಳು ಒಂದು ಪಾಲುಗಾರಿಕೆ ಉದ್ಯಮವನ್ನು ಆರಂಭಿಸುವರು. A ಯು 2000ರೂ. ಬಂಡವಾಳದೊಡನೆ ವ್ಯವಹಾರ ಆರಂಭಿಸುವನು.  2 ತಿಂಗಳ ನಂತರ B ಯು 2000ರೂ. ತೊಡಗಿಸುವನು. 6 ತಿಂಗಳ ನಂತರ ಅ ಯು 6000ರೂ. ಬಂಡವಾಳ ತೊಡಗಿಸುವನು. ಒಂದು ವರ್ಷದ ನಂತರ ಅವರಿಗೆ 5000ರೂ ಲಾಭ ಸಿಗುತ್ತದೆ.  A ಯು ಕಾರ್ಯನಿರತ ಪಾಲುದಾರನಾಗಿದ್ದು ಅವನಿಗೆ ಒಟ್ಟು ಲಾಭದ 20% ಅಂಶ ಕೊಡಬೇಕು. ಹಾಗಾದರೆ ಒಟ್ಟು ಲಾಭದಲ್ಲಿ A, B ಮತ್ತು C ಗಳ ಪಾಲೆಷ್ಟು?

 

ಪರಿಹಾರ:

ಪಾಲುದಾರರು ಹಣವನ್ನು ಬೇರೆ ಬೇರೆ ಅವಧಿಗೆ ತೊಡಗಿಸಿದುದರಿಂದ ಇದು ಸಂಯುಕ್ತ ಪಾಲುಗಾರಿಕೆ’.

 

ಹಂತ 1

A ಯು ಆರಂಭದಿಂದಲೇ ಹಣ ತೊಡಗಿಸಿದ್ದಾನೆ. ಆದ್ದರಿಂದ ಅವನ ಬಂಡವಾಳ 12 ತಿಂಗಳೂ ಇದೆ.

B ಯು 2 ತಿಂಗಳ ನಂತರ ಸೇರಿದ್ದಾನೆ. ಆದ್ದರಿಂದ ಅವನ ಬಂಡವಾಳ 10 ತಿಂಗಳು ಇದೆ.

C ಯು 6 ತಿಂಗಳ ನಂತರ ಸೇರಿದ್ದಾನೆ. ಅವನ ಬಂಡವಾಳ 6 ತಿಂಗಳು ಇದೆ.

A ಯ ಬಂಡವಾಳ: 2000 ರೂ. 12 ತಿಂಗಳೂ ಇದೆ.

B ಯ ಬಂಡವಾಳ: 2000 ರೂ. 10 ತಿಂಗಳಿವೆ.

C ಯ ಬಂಡವಾಳ: 6000 ರೂ. 6 ತಿಂಗಳಿವೆ.

ಹಂತ 2

 

A ಯ ಬಂಡವಾಳ 1 ತಿಂಗಳಿಗೆ = 24,000 ರೂ. (=2000*12)

B ಯ ಬಂಡವಾಳ 1 ತಿಂಗಳಿಗೆ = 20,000 ರೂ. (=2000*10)

C ಯ ಬಂಡವಾಳ 1 ತಿಂಗಳಿಗೆ = 36,000 ರೂ. (=6000*6)

ಅವರೆಲ್ಲರ ಬಂಡವಾಳಗಳ ಅನುಪಾತ = 24000:20000:36000   = 6:5:9

 

ಒಟ್ಟು ಲಾಭ =  5000 ರೂ.

ಂ = 1000(500020%)

ಉಳಿದ ಲಾಭದ ಹಣ = ಒಟ್ಟು ಲಾಭ ಕಾರ್ಯನಿರತ ಪಾಲುದಾರನಿಗೆ ಕೊಟ್ಟ ಹಣ = 5000-1000 = 4000 ರೂ.

 

,,ಅ ಗಳ ಲಾಭದ ಅನುಪಾತ: 6:5:9(ಬಂಡವಾಳದ ಅನುಪಾತ)

= 6+5+9=20

ಹಂತ 3

 

ಒಟ್ಟು ಲಾಭ =  5000 ರೂ.

ಕಾರ್ಯನಿರತ ಪಾಲುದಾರ A ಗೆ ಕಾರ್ಯ ನಿರ್ವಹಿಸಿದ್ದಕ್ಕೆ = ರೂ.1000(5000 20%)

ಉಳಿದ ಲಾಭದ ಹಣ = ಒಟ್ಟು ಲಾಭ ಕಾರ್ಯನಿರತ ಪಾಲುದಾರನಿಗೆ ಕೊಟ್ಟ ಹಣ = 5000-1000 = 4000 ರೂ.

 

A, B,C ಗಳ ಲಾಭದ ಅನುಪಾತ: 6:5:9(ಬಂಡವಾಳದ ಅನುಪಾತ)

ಅನುಪಾತದ ಪದಗಳ ಮೊತ್ತ = 6+5+9=20

A ಯ ಪಾಲಿನ ಲಾಭ =  (6/20)*4000 = 1200 ರೂ.

B ಯ ಪಾಲಿನ ಲಾಭ =  (5/20)*4000  = 1000 ರೂ.

C ಯ ಪಾಲಿನ ಲಾಭ =  (9/20)*4000  = 1800 ರೂ.

 

ತಾಳೆ :

ಲಾಭಾಂಶದ ಮೊತ್ತ = 1200+1000+1800 = 4000 ರೂ.

ಕಾರ್ಯನಿರತ ಪಾಲುದಾರ A ಗೆ ಕೊಟ್ಟದ್ದು = 1000 ರೂ.

ಒಟ್ಟು ಲಾಭ = 4000+1000 = 5000 ರೂ.

A, B, C ಗಳ ಲಾಭಗಳ ಅನುಪಾತ = 1200:1000:1800  = 6:5:9

ಇದು ಅವರ ಬಂಡವಾಳಗಳ ಅನುಪಾತವೇ ಆಗಿದೆ.

 

 

4.13 ಕಲಿ  ಾರಾಂಶ

 

 

ಸಂಖ್ಯೆ

ಕಲಿತ ಮುಖ್ಯಾಂಶಗಳು

1

ಪಾಲುದಾರಿಕೆ, ಸರಳ ಪಾಲುಗಾರಿಕೆ, ಸಂಯುಕ್ತ ಪಾಲುಗಾರಿಕೆ, ಕಾರ್ಯನಿರತ ಪಾಲುದಾರ.