2.10 ಬಹುಪದಗಳ ಭಾಗಾಕಾರ (Division of Polynomials)

 

ಯಾವುದೇ ಸಂಖ್ಯೆಗೆ: ಭಾಜ್ಯ = (ಭಾಗಲಬ್ಧ*ಭಾಜಕ) + ಶೇಷ.

ಈ ಮೇಲಿನ ಸಂಬಂಧ ಬಹುಪದಗಳಿಗೂ ಅನ್ವಯಿಸುತ್ತದೆ.

 

2.10.1 ಏಕಪದವನ್ನು ಏಕಪದದಿಂದ ಭಾಗಿಸುವುದು (Division of Monomial by monomial)

 

2.10.1 ಸಮಸ್ಯೆ 1: 12m3 ನ್ನು 4 m2 n ನಿಂದ ಭಾಗಿಸಿ.

 

ಪರಿಹಾರ:

ಹಂತ 1: 12m3 n5 / 4 m2 n =  (12/4)* (m3 n5 /m2 n)

ಹಂತ 2: 12/4 =   3,

ಹಂತ 3:

m3 n5/ m2 n = m3-2 n5-1 = m n4

12m3 n5 /4 m2 n = 3 m n4

 

ತಾಳೆ:

 (ಭಾಗಲಬ್ಧ*ಭಾಜಕ) + ಶೇಷ = 4 m2 n*3 m n4 +0 =12 m2+1 n1+4 =12m3 n5  - ಭಾಜ್ಯ

 

 

2.10.1  ಸಮಸ್ಯೆ 2 : 57x2y2z2 ನ್ನು 19xyz ನಿಂದ ಭಾಗಿಸಿ.

ಹಂತ 1 : 

57x2y2z2 /19xyz  = (57/19) * (x2y2z2)/xyz

ಹಂತ 2:

57/19 =3

ಹಂತ 3:

x2y2z2/xyz = x2-1y2-1z2-1  = xyz

 

57x2y2z2 /19xyz  = (57/19) * (x2y2z2)/xyz  =3xyz

 

ತಾಳೆ:

(ಭಾಗಲಬ್ಧ*ಭಾಜಕ) + ಶೇಷ = (3xyz * 19xyz) +0 = (3*19)*xyz*xyz +0=   57x1+1y1+1z1+1+0=57x2y2z2   - ಭಾಜ್ಯ

 

ಈ ಮೇಲಿನ ಸಮಸ್ಯೆಯಲ್ಲಿ ಗಮನಿಸಬೇಕಾದ ಅಂಶಗಳು:

3  ಎನ್ನುವುದು 57/19 ಅಂದರೆ ಏಕ ಪದಗಳ ಸಹಗುಣಕಗಳ ಭಾಗಲಬ್ಧ.

 

ಅದೇರೀತಿ xyz ಎಂಬುದು ಚರಾಕ್ಷರಗಳ ಭಾಗಲಬ್ಧ..

 

ಏಕಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು (Steps to divide a monomial by monomial):

ಭಾಗಲಬ್ಧವು ಎರಡು ಭಾಗಗಳನ್ನು ಹೊಂದಿದೆ - ಸಂಖ್ಯಾ ಸಹಗುಣಕ ಮತ್ತು ಚರಾಕ್ಷರಗಳು. ಇದನ್ನು ಪಡೆಯುವುದು ಹೇಗೆ?

1.      ಎರಡು ಏಕಪದಗಳ ಭಾಗಲಬ್ಧದ ಸಹಗುಣಕವು ಆ ಎರಡು ಏಕಪದಗಳ ಸಂಖ್ಯಾ ಸಹಗುಣಕಗಳ ಭಾಗಲಬ್ಧಕ್ಕೆ ಸಮ.

2.      ಎರಡು ಏಕಪದಗಳ ಭಾಗಲಬ್ಧದ ಚರಾಕ್ಷರ ಭಾಗವು ಆ ಎರಡು ಏಕಪದಗಳ ಚರಾಕ್ಷರಗಳ ಭಾಗಲಬ್ಧವೇ ಆಗಿರುತ್ತದೆ.


2.10.2  ಬಹುಪದವನ್ನು ಏಕಪದದಿಂದ ಭಾಗಿಸುವುದು (Division of a Polynomial by a Monomial):

 

 

2.10.2  ಸಮಸ್ಯೆ 1: 4023m2n2-6032m2n -8042m3 ಈ ಬೀಜೋಕ್ತಿಯನ್ನು (-2012m2) ದಿಂದ ಭಾಗಿಸಿ.

 

ಪರಿಹಾರ:

4023= (2x201)3= (2)3x(201)3, 6032  = (3x201)2 = (3)2x(201)2, 8042  = (4x201)2 = (4)2x(201)2

 

 [4023m2n2-6032m2n -8042m3 n4]/(-2012m2)

=[(2)3*(201)3 m2n2-(3)2*(201)2 m2n -(4)2*(201)2m3 n4]/(-2012m2)

= -[ (2)3*(201) n2-(3)2* n -(4)2*m1 n4] = - (8*201* n2-9n -16mn4)

 

ತಾಳೆ:

ಭಾಜಕ* ಭಾಗಲಬ್ಧ + ಶೇಷ = (-2012m2)*[-(8*201* n2+9n +16mn4)]+0

= +(2012m2)*(8*201* n2 -2012m2*9n -2012m2*16mn4) +0

= 8*2013m2 n2  -9*2012m2+2n-16*2012m2+1n4)

= 23*  2013m2 n2  - 32 *2012m4n-42*2012 m3 n4

= (2*201)3m2n2-(3*201)2 m2n –(4*201)2 m3 n4

= 4023 m2n2 - 6032 m2n - 8042 m3 n4

= ಭಾಜ್ಯ.

 

2.10.2  ಸಮಸ್ಯೆ 2 :  2a4 b3+ 8a2 b2 ವನ್ನು 2ab ಯಿಂದ ಭಾಗಿಸಿ.

 

ಪರಿಹಾರ:

 (2a4 b3+ 8a2 b2)/2ab = (2a4 b3/2ab) + (8a2 b2 / 2ab) = a3 b2 +4a b

 

ತಾಳೆ:

ಭಾಜಕ* ಭಾಗಲಬ್ಧ + ಶೇಷ = 2ab*(a3 b2 +4a b) +0= 2a4 b3+ 8a2 b2   = ಭಾಜ್ಯ

 

ಬಹುಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು:

 

1.      ಬಹುಪದದ ಪ್ರತೀ ಪದವನ್ನು ಏಕಪದದಿಂದ ಭಾಗಿಸಿ.

2.      ಈ ರೀತಿ ಪಡೆದ ಭಾಗಲಬ್ಧಗಳನ್ನು ಒಟ್ಟಿಗೆ ಸೇರಿಸಿ.(ಸೂಕ್ತ ಚಿಹ್ನೆಯಿಂದ).

 

2.10.3 ಬಹುಪದವನ್ನು ದ್ವಿಪದದಿಂದ ಭಾಗಿಸುವುದು (Division of a Polynomial by a Binomial) (Long division method):

 

2.10. ಸಮಸ್ಯೆ 1: ಮೊತ್ತ ಮೊದಲಿಗೆ 7+x3-6x (ತ್ರಿಪದ)ವನ್ನ ಒಂದು ದ್ವಿಪದ x+1 ರಿಂದ ಭಾಗಿಸುವಾ.

                             

ಪರಿಹಾರ:

ಭಾಜ್ಯವು 3ನೇ ಘಾತದ ಬೀಜೋಕ್ತಿ, ಭಾಜಕವು 1ನೇ ಘಾತದ ದ್ವಿಪದ.

ಹಂತ

ವಿಧಾನ

 

1

ಭಾಜ್ಯ ಮತ್ತು ಭಾಜಕಗಳನ್ನು ಅವುಗಳ ಘಾತ ಸೂಚಿಯ ಇಳಿಕೆಯ ಕ್ರಮದಲ್ಲಿ ಬರೆಯಿರಿ.      

2

ಯಾವುದೇ ಘಾತದ ಬೀಜ ಪದ ಇಲ್ಲದಿದ್ದರೆ ಸಹಗುಣಕ ‘0’ ಹಾಕಿ, ಬರೆಯಿರಿ

x3  -6x+7  ನ್ನು (x3  +0x2-6x+7) ಎಂದು ಬರೆಯಿರಿ.

3

ಭಾಜ್ಯದ ಮೊದಲ ಪದವನ್ನು ಭಾಜಕದ ಮೊದಲ ಪದದಿಂದ ಭಾಗಿಸಿ ( x3/x = x2). ಆದ್ದರಿಂದ

x2  ವು ಭಾಗಲಬ್ಧ ಮೊದಲನೇ ಪದ ಇದನ್ನು ಮೇಲ್ತುದಿಯಲ್ಲಿ ಬರೆಯಿರಿ.

4

ಭಾಜಕವನ್ನು ಭಾಗಲಬ್ಧ ಮೊದಲ ಪದ (x2) ರಿಂದ ಗುಣಿಸಿ, ಭಾಜ್ಯದ ಕೆಳಗೆ ಬರೆಯಿರಿ (=x3+ x2)

5

ಹಂತ 4 ರಲ್ಲಿ ಬಂದ ಉತ್ತರವನ್ನು ಭಾಜ್ಯದಿಂದ ಕಳೆಯಿರಿ.( x3 +0x2 ) – (x3+ x2) =  - x2

6

ಭಾಜ್ಯದ ಮುಂದಿನ ಪದವನ್ನು ತೆಗೆದುಕೊಂಡು,(=-6x) ಹಂತ 5ರ ಉತ್ತರದ ಮುಂದೆ ಬರೆಯಿರಿ. ಆಗ

-x2 – 6x. ಇದು ಹೊಸ ಭಾಜ್ಯ.

7

ಹಂತ 3 ರಿಂದ 6 ರವರೆಗಿನದ್ದನ್ನು ಪುನರಾವರ್ತಿಸಿ, ಭಾಗಾಕಾರವನ್ನು ಮುಂದುವರಿಸಿ

8

ಶೇಷದ ಘಾತ ಸೂಚಿಯು ಭಾಜಕದ ಘಾತ ಸೂಚಿಗಿಂತ ಕಡಿಮೆಯಾದಾಗ ಭಾಗಾಕಾರ ಕ್ರಿಯೆ ನಿಲ್ಲಿಸಿ.

 

 

ತಾಳೆ:

ಭಾಜಕ* ಭಾಗಲಬ್ಧ + ಶೇಷ = (x+1)* (x2-x-5)+12 

= x*(x2-x-5) +1*(x2-x-5)+12

 = (x3-x2-5x)+ (x2-x-5)+12 = x3-x2+ x2-5x-x -5+12

= x3-0x2-6x +7

= x3-6x +7 – ಇದು ದತ್ತ ಭಾಜ್ಯ.

 

 

2.10.3  ಸಮಸ್ಯೆ 2: x5 -9x2 +12x-14 ದಿಂದ x -3 ಭಾಗಿಸಿ.

 

ಪರಿಹಾರ:

ಭಾಜ್ಯವು ಘಾತಾಂಶದ ಇಳಿಕೆಯ ಕ್ರಮದಲ್ಲಿಯೇ ಇದೆ. ಆದರೆ ಬಹುಪದದಲ್ಲಿ ಇಲ್ಲದ x ನ ಘಾತಾಂಕಗಳನ್ನು ಸೊನ್ನೆ ಸಹಗುಣಕ ಸೇರಿಸಿ ಬರೆಯಬೇಕು.

 

xಭಾಜ್ಯ: x5 +0x4 +0x3-9x2 +12x-14.

ಭಾಜಕವು ಘಾತಾಂಕದ ಇಳಿಕೆಯ ಕ್ರಮದಲ್ಲಿಯೇ ಇದೆ.

 

      - | x5 -3x4

         -    |3x4 +0x3

             - |3x4 -9x3

                   -  |9x3 -9x2

                    - |9x3 -27x2

                          -  |18x2+12x

                          -  |18x2 -54x

                                    -|66x-14

                                     -|66x-198

                                             184

 

 

ತಾಳೆ:

ಭಾಗಲಬ್ಧವನ್ನು ಭಾಜ್ಯದಿಂದ ಗುಣಿಸಿ, ಶೇಷವನ್ನು ಕೂಡಿಸಿ ತಾಳೆ ನೋಡಬಹುದು. ಆದರೆ ಬೀಜೋಕ್ತಿಯು ತುಂಬಾ ದೊಡ್ಡದಿರುವುದರಿಂದ, ತಾಳೆ ನೋಡಲು ಬೇರೆ ವಿಧಾನ ಬಳಸುವಾ.

x=2 ಆದಾಗ ಫಲಿತಾಂಶವನ್ನು ನೋಡುವಾ.

x=2 ಆದಾಗ,

ಭಾಜಕ =x5 -9x2 +12x-14 = 25 -9*22 +12*2-14

= 32-36+24-14

= 6

ಭಾಜಕ = x-3 =2-3 = -1

ಭಾಗಲಬ್ಧ =  

  = 24 +3*23 +9*22+18*2+66

  = 16+24+36+66=178

ಈಗ,

ಭಾಗಲಬ್ಧ*ಭಾಜಕ + ಶೇಷ = 178*-1+184

  = -178+184

  = 6 - ದತ್ತ ಭಾಜ್ಯ

 

 

2.10. ಸಮಸ್ಯೆ 3:  (6p3 -19p2 -8p) ಯನ್ನು (p2 -4p+2) ರಿಂದ ಭಾಗಿಸಿ.

 

 

ಪರಿಹಾರ:

               6p+5

p2 -4p+2

( -)     |6p3 -24p2 +12p                --à ---- (1)      {= 6p*(p2 -4p+2)}

(=)             |+5 p2 -20p                --à -----(2)     {ಸಮೀಕರಣ (1) ನ್ನು ಭಾಜ್ಯದಿಂದ ಕಳೆಯಿರಿ}

( -)             | 5p2 - 20p+10           --à -----(3)      {= 5*(p2 -4p+2)}

(=)                              -10           --à  ಶೇಷ         {ಸಮೀಕರಣ (3) ರಿಂದ (2)ನ್ನು ಕಳೆಯಿರಿ. }

 

ತಾಳೆ:

ಭಾಗಲಬ್ಧ*ಭಾಜಕ = (6p+5)* (p2 -4p+2)

  = 6p* p2  +6p*-4p+6p*2+5* p2+5*-4p+5*2

  = 6p3 -24p2+12p+5p2-20p+10

  = 6p3 -19p2-8p+10

 

ಭಾಗಲಬ್ಧ*ಭಾಜಕ + ಶೇಷ = (6p3 -19p2-8p+10)-10

    = 6p3 -19p2-8p - ದತ್ತ ಭಾಜ್ಯ

 

 

2.10. ಸಮಸ್ಯೆ 4: a5 +b5 ನ್ನು (a+b) ಯಿಂದ ಭಾಗಿಸಿ.

 

ಪರಿಹಾರ:

a+b

 (-)  |a5+ a4b

      (=)   - a4b+0

        (-) |a4b-a3b2

         (=)       a3b2+0

              (-) | a3b2+ a2b3

             (=)           - a2b3+0

                          (-) |-a2b3-ab4

                         (=)            ab4 + b5

                                (-)    |ab4 + b5

                                  (=)         0

 

 

ಅಭ್ಯಾಸ: ಭಾಜಕ*ಭಾಗಲಬ್ಧ+ಶೇಷ = ಭಾಜ್ಯ ಆಗುವುದೋ ಎಂದು ನೋಡಿ.

 

 

2.10 ಕಲಿತ  ಸಾರಾಂಶ

 

 

ಸಂ

ಕಲಿತ ಮುಖ್ಯಾಂಶಗಳು

1

ಏಕಪದವನ್ನು ಏಕಪದದಿಂದ ಭಾಗಿಸುವುದು.